ನೀನಿರಬೇಕಿತ್ತು ಜೊತೆಯಲ್ಲಿ..
351 ಕಿಲೋ ಮೀಟರ್ ದೂರದಲ್ಲಿರುವ ಅಮ್ಮ ನೆನಪಾಗುತ್ತಿದ್ದಾಳೆ.. ಜ್ವರದ ತಾಪ ಹೆಚ್ಚಾಗುತ್ತಿದ್ದಂತೆ ಅಮ್ಮನ ನೆನಪು ಕೂಡ ಹೆಚ್ಚಾಗುತ್ತಿದೆ. ಮಾತ್ರೆಗಳು, ಸಿರಪ್ ಕಂಡರೆ ಅಲರ್ಜಿಯಾಗುವ ನನಗೆ ಅಮ್ಮ ಮಾಡಿಕೊಡುವ ಹಿತ್ತಲ ಮದ್ದು ಜ್ವರದ ತಾಪ ನಿವಾರಿಸುವ ಮನೆಮದ್ದು. ಬೆಂಗಳೂರ ಕಾಂಕ್ರೀಟು ನೆಲದಲ್ಲಿ ಮನೆಯ ಹಿತ್ತಿಲು ಕಳೆದು ಹೋಗಿದೆ. ಮನೆಮದ್ದು ಇನ್ನೆಲ್ಲಿ ಹುಡುಕಲಿ ?. ಪ್ಲಾಸ್ಟಿಕ್ ಚೀಲದೊಳಗೆ ಒಣಗಿದ ಬೇರು ತಂದು ಕಷಾಯ ಮಾಡ ಹೊರಟರೆ, ಅದರಲ್ಲೂ ಅಮ್ಮ ಮಾಡಿಕೊಡುವ ಕಷಾಯದ ಘಮ ಹುಡುಕುತ್ತೇನೆ.. ಮತ್ತೆ ನೆನಪಾಗುತ್ತಾಳೆ ಅಮ್ಮ..
ಅಮ್ಮನಿಂದ ದೂರದಲ್ಲಿದ್ದು ದುಡಿಮೆಯಲ್ಲಿ ಹೆಣಗುತ್ತಿರುವ ಮಕ್ಕಳ ಕಥೆಯೇ ಇದೇನಾ..?

Amma always great
ReplyDelete